Wednesday, December 30, 2009

ಗಾಯನ ಗಾರುಡಿಗನ ನಿರ್ಗಮನ...


ಸುದ್ಹಿ ತಿಳಿದ ಮೇಲೆ ಏನ್ ಬರೀಬೇಕು ಅಂತ ತಿಳಿಲಿಲ್ಲ ನಂಗೆ...

ನಾನ್ ಚಿಕ್ಕವನಿದ್ದಾಗ ಅಣ್ಣಾವರ ಹಾಡುಗಳ್ನ, ಮೈಸೂರು ಅನಂತಸ್ವಾಮಿ, ಅಶ್ವಥ್ ಅವ್ರ ಭಾವಗೀತೆ ಕೇಳ್ಕೊಂಡ್ ಬೆಳೆದವನು...

ಬೆಳಿತಾ ಬೆಳಿತಾ ಭಾವಗೀತೆ ಹಾಗು ಜನಪದ ಗೀತೆ ಬಗ್ಗೆ ಆಸಕ್ತಿ ಜಾಸ್ತಿ ಆಯಿತು...

ಮೈಸೂರ್ ಅನಂತಸ್ವಾಮಿ ಅವ್ರು ತೀರ್ಕೊಂಡ್ ಮೇಲೆ ಸುಗಮ ಸಂಗೀತ ಕ್ಷೇತ್ರಕ್ಕೆ ಅನನ್ಯ ಸೇವೆ ಅರ್ಪಿಸ್ದವ್ರು ಅಶ್ವಥ್ ಅವ್ರು...ಅವ್ರ ಶಾರೀರ ದಲ್ಲಿ ಏನ್ ಮಾಧುರ್ಯ, ಲವ್ ಲವಿಕೆ, ಉತ್ಸಾಹ ಎಂಥವರು ಕೂಡ ನಿದ್ರೆ ಇಂದ

ಎದ್ ಬಿಡ್ತ್ಹಿದ್ರು....ಅದು ಒರಟು ದನಿನೆ ಅನ್ಸಿದ್ರು ಕಂಪಿಗೆ ಮನಸೋತವರೆ ಇರ್ಲಿಲ್ಲ .....

ಅವ್ರ ಹಾಡುಗಳ್ನ ಕೇಳ್ತಾ ಕೇಳ್ತಾ ನಂಗು ಅನಿಸೋದು ಅವ್ರ ಮಾರ್ಗದರ್ಶನದಲ್ಲಿ ಸುಗಮ ಸಂಗೀತ ಕಲಿಬೇಕು ....


೨೦೦೦ನೆ ಸಾಲಿನಲ್ಲಿ ಬೆಂಗಳೂರಿನಲ್ಲಿ ವಿಧಾನ ಸೌಧ ಮುಂಭಾಗದಲ್ಲಿ ೦೦೦ ಯುವ ಗಾಯಕರ್ನೆಲ್ಲ ಸೇರ್ಸಿ

ಕುವೆಂಪು ಅವ್ರ ಕ್ರಾಂತಿ ಗೀತೆ ಹಾಡ್ಸಿದ್ರು.. ಕೆಲಸ ತುಂಬಾ ಕಷ್ಟ ಅನ್ಸಿದ್ರು ಬಿಡದೆ ಅದ್ನ ಮಾಡಿದವರು ಅಶ್ವಥ್ ಅವ್ರು.... ಎರಡ್ ಸಾವಿರ ಗಾಯಕರಲ್ಲಿ ನಾನೂ ಒಬ್ಬ. ಅವ್ರು ಯಾರೇ ಆಗ್ಲಿ ಅವರಿಂದ ಕೆಲಸ ಸರಿಯಾಗ್ ತೆಗಿದೆ ಬಿಡ್ತಿರ್ಲಿಲ್ಲ.... ಮಟ್ಟಿಗೆ ಹೇಳೋದಾದ್ರೆ ಅವರೊಬ್ಬ ಛಲದಂಕ ಮಲ್ಲ...ಅವರ್ನ ನೋಡಿ ರೋಮಾಂಚನ ಆಯಿತು....


ಅಶ್ವಥ್ಗೆ ಅಶ್ವಥ್ ಅವ್ರೆ ಸಾಟಿ...


ಅವ್ರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಪ್ರಾರ್ಥಿಸುವ...

No comments:

Post a Comment